Filter Offers
Keyword
Location
Offer Type
Sort
Latest
Swathi Harsha
added an offer.

ರೈತ ಮಿತ್ರ ಯೋಜನೆಯಡಿಯಲ್ಲಿ ರಾಜ್ಯದ ಪ್ರತಿಯೊಂದು ತಾಲ್ಲೂಕಿನಲ್ಲಿ, ಹೋಬಳಿಗೆ ಒಂದರಂತೆ ರೈತ ಸಂಪರ್ಕ ಕೇಂದ್ರಗಳನ್ನು ಕೃಷಿ ಇಲಾಖೆಯ ಪ್ರಾಥಮಿಕ ಕಾರ್ಯನಿರ್ವಹಣಾ ಘಟಕವಾಗಿ ಕಾರ್ಯನಿರ್ವಹಿಸಲು ಹಾಗೂ ಕ್ಷೇತ್ರ ಮಟ್ಟದ ಸಮಸ್ಯೆಗಳನ್ನು ಗುರುತಿಸಿ ಅವುಗಳಿಗೆ ಪರಿಹಾರೋಪಾಯ ಮಾರ್ಗಗಳನ್ನು ರೂಪಿಸಲು ಸ್ಥಾಪಿಸಲಾಗಿದೆ.
ಕೃಷಿ, ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆಗಳಿಗೆ ಸಂಬಂಧಪಟ್ಟ ಸಮಗ್ರ ಮಾಹಿತಿಯನ್ನು ರೈತ ಸಂಪರ್ಕ ಕೇಂದ್ರಗಳಲ್ಲಿ ಮಾಹಿತಿ ನೀಡಲು ಸದರಿ ಇಲಾಖೆಗಳ ತಾಂತ್ರಿಕ ಅಧಿಕಾರಿಗಳನ್ನು ಒಂದೇ ಸೂರಿನಡಿ ಕಾರ್ಯನಿರ್ವಹಿಸಲು ಕ್ರಮಕೈಗೊಳ್ಳಲು ಹಾಗೂ ಇನ್ನಿತರೆ ಕಾರ್ಯಚಟುವಟಿಕೆಗಳ ಸಮನ್ವಯ ಸಾಧಿಸಲು ಸರ್ಕಾರದ ಆದೇಶ ಸಂಖ್ಯೆ ಕೃಇ 108. ಕೃಯೋಕಾ 2013, ದಿನಾಂಕ 17.07.2014 ರ ಆದೇಶದಲ್ಲಿ ಸೂಚಿಸಲಾಗಿರುತ್ತದೆ. ರಾಜ್ಯದಲ್ಲಿ ರೈತರ ಆದಾಯವನ್ನು ದ್ವಿಗುಣಗೊಳಿಸುವ ಸಂಬಂಧ ಕ್ಷೇತ್ರಮಟ್ಟದಲ್ಲಿ ಸಮಗ್ರ ಬದಲಾವಣೆಗಳನ್ನು ತರುವುದು ಅವಶ್ಯವಾಗಿರುತ್ತದೆ. ಪ್ರಸ್ತುತ ರೈತ ಸಂಪರ್ಕ ಕೇಂದ್ರಗಳನ್ನು, ರೈತರಿಗೆ ಮಾಹಿತಿ ತಂತ್ರಜ್ಞಾನ ವಿನಿಮಯಕ್ಕೆ ಹೆಚ್ಚಿನ ಒತ್ತು ನೀಡುವುದರ ಮೂಲಕ ನೋಡಲ್ ಕ್ರಿಯಾಶೀಲ ಕೇಂದ್ರಗಳಾಗಿ ಬಲಪಡಿಸಲು ಹಾಗೂ ರೈತರ ಆದಾಯವನ್ನು ದ್ವಿಗುಣಗೊಳಿಸಲು ಕ್ಷೇತ್ರಮಟ್ಟದಲ್ಲಿ ಕ್ರಮವಹಿಸಲು ಸರ್ಕಾರದ ಆದೇಶ ಸಂಖ್ಯೆ AGRI. Act /112 /2019, ಬೆಂಗಳೂರು, ದಿನಾಂಕ: 31.10.2019 ರಂದು ಆದೇಶ ಹೊರಡಿಸಿದೆ. ಈ ಕುರಿತು ಕೇಂದ್ರ ಕಛೇರಿಯಿಂದ ಜಿಲ್ಲೆಗಳಿಗೆ ಸುತ್ತೋಲೆ (3.12.2019 ಮತ್ತು 04.02.2020) ನೀಡಿ ಪ್ರತಿ ತಿಂಗಳ 1 ಮತ್ತು 3 ನೇ ವಾರದ ಸೋಮವಾರದಂದು ಬೆಳಿಗ್ಗೆ 10.00 ರಿಂದ 1.00 ಗಂಟೆಯವರೆಗೆ ಸಭೆ ನಡೆಸಲು ಸೂಚಿಸಲಾಗಿರುತ್ತದೆ. ರೈತರ ಆದಾಯವನ್ನು ದ್ವಿಗುಣಗೊಳಿಸುವ ನಿಟ್ಟಿನಲ್ಲಿ ಕೃಷಿ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ರೈತ ಸಂಪರ್ಕ ಕೇಂದ್ರಗಳನ್ನು ನೋಡಲ್ ಕ್ರಿಯಾಶೀಲ ಕೇಂದ್ರಗಳಾಗಿ ಬಲಪಡಿಸುವ ಬಗ್ಗೆ ಈಗಾಗಲೇ ಸುತ್ತೋಲೆ 1 (ಸಂ.ಕೃಇ 108 ಉ.ಕೃ.ನಿ(ಭೂಚೇ) ರೈಆದ್ವಿ/ಸು 2019-20 ರೈತ ಸಂಪರ್ಕ ಕೇಂದ್ರಗಳ ಮೂಲಕ ಕೃಷಿ ವಿಸ್ತರಣೆಯ ಬಲವರ್ಧನೆಗಾಗಿ ಸಭೆ ಆಯೋಜನೆ
2022-23 ನೇ ಸಾಲಿಗೆ ರೈತ ಸಂಪರ್ಕ ಕೇಂದ್ರಗಳ ಮೂಲಕ ಕೃಷಿ ವಿಸ್ತರಣೆಯ ಬಲವರ್ಧನೆ ಕಾರ್ಯಕ್ರಮದ ಸಭೆಗಳನ್ನು ನಡೆಸಲು ಹಾಗೂ ಸದರಿ ಸಭೆಗಳಲ್ಲಿ ಏರ್ಪಡಿಸುವ ಪದ್ಧತಿ ಪ್ರಾತ್ಯಕ್ಷತೆ, ತರಬೇತಿ ಸಾಮಾಗ್ರಿ, ದೃಶ್ಯಸಾಧನ ಹಾಗೂ ಮಾದರಿ ಗ್ರಾಮದಲ್ಲಿ ವಿವಿಧ ಇಲಾಖೆಗಳ ನೂತನ ಕಾರ್ಯಕ್ರಮಗಳನ್ನು ಚಾಲ್ತಿ ಯೋಜನೆಗಳಡಿ ಅನುಷ್ಟಾನ ಮಾಡಿ ಸಂಯೋಜನೆ ಮಾಡಲು ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ಲಭ್ಯವಿರುವ ಅನುದಾನವನ್ನು ಈ ಕೆಳಕಂಡಂತೆ ವೆಚ್ಚ ಮಾಡಿ ಪರಿಣಾಮಕಾರಿಯಾಗಿ ಅನುಷ್ಠಾನ ಮಾಡಲು ಸೂಚಿಸಿದೆ